Friday, 22 February 2013

ಅವಳ ಗಂಡ




ಅವಳು ತನ್ನನ್ನು ತಾನು ಉದ್ದನೆಯ ಕನ್ನಡಿಯಲ್ಲಿ ನೋಡಿಕೊಂಡಳು. ಆಕೆಯ ಸೌಂದರ್ಯ ಎಂತಹ ನಿರಸಿಕನನ್ನೂ ಕೊಲ್ಲುವಂತಿತ್ತು. ಹಲವು ಮೇಕಪ್ ಇಟರೇಶನ್ಗಳ ನಂತರ ಕೊನೆಗೂ ಸಂತಸಗೊಂಡ ಆಕೆ ಗಂಡನ ಜೊತೆಗೆ ಪ್ರೇಮಿಗಳ ದಿನದ ರೊಮಾಂಟಿಕ್ ಕ್ಯಾಂಡಲ್ ಲೈಟ್ ಡಿನ್ನರ್ಗೆ ಹೊರಡಲು ಅನುವಾದಳು. "ನೀನೇ ನೀಈಈಈನೇ" ಎಂದು ಗುನುಗುತ್ತ ಹಾಲ್ಗೆ ನಡೆದ ಆಕೆಗೆ ಕಂಡಿದ್ದು ಸೋಫಾದ ಮೇಲೆ ಆಸೀನನಾಗಿದ್ದ ಆಕೆಯ ಗಂಡ. "ಇವತ್ತು ಭಾರತ-ಪಾಕಿಸ್ತಾನ ಮ್ಯಾಚ್ ಇದ್ದು ಮಾರಾಯ್ತಿ... ನಾಳೆ ಹೋಪನನೆ ಊಟಕ್ಕೆ?? " ಅಂದ.

-ಕಾವ್ಯಧಾರೆ

2 comments:

  1. ಹಃಹಃಹಃಹಃಹಃಹಃ
    ಆಂಟಿ ಗೆ ಆಂಟಿ ಕ್ಲೈಮಾಕ್ಸ್ ಆಗಿ ಬಿಡ್ತು ಪಾಪಾ

    ReplyDelete