ಗೆಳೆಯಾ....
ನೀ ಕೊಟ್ಟ ಗೆಜ್ಜೆಯು, ಬಿಡದೆನ್ನ ಕಾಡುತಿದೆ...
ಜೊತೆಗೆ ಸುತ್ತಾಡಿ, ನಕ್ಕು, ಅತ್ತು, ಹದವಾದ ಒಲವನ್ನು ತೋರುತಿದೆ...
ನನ್ನ ಹೆಸರಿನ ಮುಂದೆ ಗೀಚುತಿರುವೆ ನಿನ್ಹೆಸರ....
ನೆನೆದು ನಿನ್ನ ಕಣ್ಣಿನ ಸನ್ನೆ, ಕೆನ್ನೆ ಕೆಂಪಾಗುತಿದೆ....!!!
--ಕಾವ್ಯಧಾರೆ
Sunday, 18 November 2012
Thursday, 15 November 2012
ಮನದ ದುಗುಡ...!!!
ಅಂದು.....
ಯಾಕೋ
ಎನನ್ನೂ ಓದುವ ಮನಸ್ಸಿರಲಿಲ್ಲ. ನಾನು ಹಾಗೆಲ್ಲಾ ಓದುವುದನ್ನು ತಪ್ಪಿಸುವ ಹುಡುಗಿಯಲ್ಲ.
ಅಂದಿನದ್ದು ಅಂದೇ ಅಭ್ಯಾಸ ಮಾಡಿ ಮುಗಿಸುವಂತ ವಿಧೇಯ ವಿದ್ಯಾರ್ಥಿನಿ. ಆದರೆ ಆ ದಿನ
ಸ್ನೇಹಿತೆಯೊಬ್ಬಳು ಹೇಳಿದ ವಿಷಯ ಮನಸ್ಸನ್ನು ಕಾಡುತಿತ್ತು. ಅವಳು ಹೇಳಿದ್ದು ಇಷ್ಟೆ :
"ಅಪ್ಪ ಅಮ್ಮನ ಒಬ್ಬಳೇ ಮಗಳು ಹೇಳ್ತೆ, ನೀ ಮದ್ವೆ ಹೇಳಿ ಆಗಿ ಹೊದ್ಮೇಲೆ ಅಪ್ಪ ಅಮ್ಮನ
ಸಂತಿಗೆ ಯಾರಿರ್ತ? ಒಂದೇ ಮಗಳಿದ್ರೆ ಇಷ್ಟೆ ಹಣೆಬರಹ"
ಇಡೀ
ದಿನ ಆ ಬಗ್ಗೆ ಯೊಚಿಸುತ್ತಿದ್ದೆ. ಗಂಡು ಮಕ್ಕಳಿಲ್ಲದಿದ್ದರೆ ಅಪ್ಪ ಅಮ್ಮನಿಗೆ ಯಾರೂ
ವೄದ್ದಾಪ್ಯದಲ್ಲಿ ದಿಕ್ಕಿರುವುದಿಲ್ಲವೇ? ನನ್ನನ್ನು ಯಾವುದೇ ತೊಡಕಿಗೆ ಎಡೆ ಮಾಡದೆ,
ಇಲ್ಲಿಯತನಕ ಕಾಪಾಡಿಕೊಂಡು ಬಂದ ನನ್ನ ಅಪ್ಪ ಅಮ್ಮನನ್ನು ಬಿಟ್ಟು ನಾನು ಇರಬೇಕೇ?
ಮನೆಗೆ ಬಂದು ಅಮ್ಮನ ಕಾಲಮೇಲೆ ಮಲಗಿಕೊಂಡು ನನ್ನ ಪ್ರಶ್ನೆಯ ಸುರಿಮಳೆಗೈಯ್ಯತೊಡಗಿದೆ.
"ಅಮ್ಮ
ನಾ ಯಾಕೆ ಒಬ್ಬಳೇ ಮಗಳು?? ನನಗ್ಯಾಕೆ ತಮ್ಮನೋ ಅಣ್ಣನೋ ಇಲ್ಲ? ನಾನು ಮುಂದಿನ ವರ್ಷ
ಇಂಜಿನೀಯರಿಂಗ್ ಹೋದಮೇಲೆ ನನ್ನ ಬಿಟ್ಟು ನಿಮಗೆ ಇರಲು ಸಾಧ್ಯವೇ? ಮಗನಿದ್ದರೆ ನಿಮ್ಮನ್ನು
ಚೆನ್ನಾಗಿ ನೋಡಿಕೊಳ್ಳುತ್ತಿದ್ದನಲ್ಲವೇ" ಅಮ್ಮ ಸುಮ್ಮನಿದ್ದಳು. ಆ ಕೂಡಲೆ ಏನನ್ನೂ
ಹೇಳಲಿಲ್ಲ. ನಾನೂ ಮುಖವುಬ್ಬಿಸಿಕೊಂಡು ಕುಳಿತೆ.
ಸ್ವಲ್ಪ
ಹೊತ್ತಿನ ನಂತರ ಅಮ್ಮ ನನ್ನ ಚಿಕ್ಕವಳಿದ್ದಾಗಿನ ಅಂಗಿಯನ್ನು ತಂದಳು. ನನಗೆ ಏನೂ
ಅರ್ಥವಾಗದೆ ಸುಮ್ಮನೆ ಕುಳಿತಿದ್ದೆ. ನಂತರ ನನ್ನ ತಲೆಯನ್ನು ಅಕೆಯ ಕಾಲ್ಮೇಲೆ
ಇರಿಸಿಕೊಂಡು ಸವರಿದಳು. ನಾನು ಮೊದಲೇ ಶಾಲೆಯಲ್ಲಿ "ಅಳುಬುರಕಿ" ಎಂದು ಕುಪ್ರಸಿದ್ದಿ
ಹೊಂದಿದ ಹುಡುಗಿ. ಅಮ್ಮ ಇಷ್ಟು ಭಾವುಕಳಾದ ಮೇಲೆ ನನಗೂ ತಡೆಯಲಾಗಲಿಲ್ಲ. ಅಳಲು
ಪ್ರಾರಂಭಿಸಿದೆ. ಅಮ್ಮ ನನ್ನನ್ನು ಪುಟ್ಟ ಮಗುವಂತೆ ಸಲಹುತ್ತ ಹೇಳಿದಳು.
"ತಂಗೀ(ಅಮ್ಮ
ನನ್ನನ್ನು ಹಾಗೇ ಕರೆಯುತ್ತಾಳೆ), ನೀನು ಹುಟ್ಟುವಾಗ, ನಮ್ಮದು ಕೆಳ ಮಧ್ಯಮ ವರ್ಗ. ಒಂದೇ
ಮಗು ಸಾಕು, ಅದನ್ನೇ ಯಾವ ಕಮ್ಮಿಯೂ ಇಲ್ಲದೇ ಬೆಳೆಸಬೇಕೆಂಬುದೆ ನನ್ನ ಆಸೆಯಾಗಿತ್ತು.
ಅದಕ್ಕೆ ನಿನಗೆ ತಮ್ಮ, ಅಣ್ಣ ಯಾರೂ ಇಲ್ಲ. ಮಗಳೂ, ಮಗ ಎಲ್ಲಾ ನನಗೆ ಒಂದೇ... ನಿನ್ನನ್ನ
ನನ್ನ ಮಗಳಂತೆಯೂ, ಮಗನಂತೆಯೂ ಬೆಳೆಸಿದ್ದು. "
ಅಮ್ಮನ ಮಾತು ನನ್ನ ಕಣ್ಣಲ್ಲಿ ಜಲಧಾರೆಯನ್ನೇ ಹರಿಸಿತ್ತು.
ಇಂದು....
ನನ್ನ
ಕಾಲ್ಮೇಲೆ ನಾನು ನಿಂತಿದ್ದೇನೆ. ಅಪ್ಪ, ಅಮ್ಮನಿಂದ ಹಲವಾರು ನೂರು ಕಿಲೋಮೀಟರ್ಗಳಷ್ಟು
ದೂರದಲ್ಲಿದ್ದೇನೆ. ದಿನವೂ ದೂರವಾಣಿಯಲ್ಲಿ ಮಾತುಕಥೆ ನಡಿಯುತ್ತದೆ. ನನ್ನ ಹಲವು
ನಿರ್ಧಾರಗಳನ್ನು ನಾನೇ ತೆಗೆದುಕೊಳ್ಳುತ್ತೇನೆ. ಆದರೆ ನನ್ನ ಕೆಲವು ನಿರ್ಧಾರಗಳು ನನಗೆ
ಖುಶಿ ಕೊಟ್ಟರೂ, ನನ್ನಪ್ಪ, ಅಮ್ಮನಿಗೆ ಖುಶಿ ಕೊಡುವ ನಿರ್ಧಾರಗಳಲ್ಲ. ಹಾಗೇ ಅವುಗಳನ್ನ
ಬದಲಿಸಲೂ ಅಗುವುದಿಲ್ಲ. ನನ್ನ ಆನಂದಕ್ಕಾಗಿ ತಮ್ಮ ಬಗೆಗೆ ವಿಚಾರ ಮಾಡದ ಅವರಿಗಾಗಿ ನನ್ನ
ಆಸೆಗಳನ್ನು ಬಲಿಗೊಡಲೇ?? ಅಥವಾ ಅವರ ಖುಷಿಯನ್ನೇ ನನ್ನದೆಂದು ತಿಳೆಯಲೇ ಎಂಬ
ಹಪತಪಿಯಲ್ಲಿರುವ,
-ಕಾವ್ಯಧಾರೆ
-ಕಾವ್ಯಧಾರೆ
ಈ ಸಂಜೆ ಯಾಕಾಗಿದೆ ನೀನಿಲ್ಲದೆ....!!!!
ಕಳೆದು ಹೋಗಲಿಂದು ನಾ ಅಂದಿನ ಸಂಜೆಯಲಿ,
ಮನದಲ್ಲಿ ಮೂಡುತಿದೆ ಮಧುರ ಭಾವನೆ...
ನಿನ್ನ ಒಲವಿನ ಪರಿ, ನಿನ್ನ ನಗುವಿನ ತರ,
ಮೋಡಿ ಮಾಡುತಿದೆ ನನ್ನ, ಮತ್ತೊಮ್ಮೆ ಭರನೆ...!!!
ಅಂದಿನ ಸಂಜೆಯ ಆ ಸಿಹಿ ಮಾತುಗಳು,
ತಂದಿವೆ ನನ್ನಲಿ ಮಂದಹಾಸದ ಉಲ್ಲಾಸ....
ನಿನ್ನ ಕಣ್ಣಿನ ಮಿಂಚು, ನಿನ್ನ ಮಾತಿನ ಝರಿ,
ಮರೆಸಿವೆ ನನ್ನೆದೆಯೊಳಗಿನ ಇರುಸುಮರುಸ....!!!
ದೂರದಲಿ ಇದ್ದರೂ ಈ ನನ್ನ ತನುವು,
ನಿನ್ನೆದೆಯಲಿ ಮುದ್ದಾದ ಗೂಡ ಕಟ್ಟುತಿದೆ....
ಸುತ್ತಲು ಹಲವರಿದ್ದರೂ, ನಾನಿಲ್ಲಿ ಒಬ್ಬಂಟಿ,
ಹಲವರಿಯುತಿದೆ ಇಂದು, ಈ ಸಂಜೆ ಯಾಕಾಗಿದೆ ನೀನಿಲ್ಲದೆ....!!!!
-ಕಾವ್ಯಧಾರೆ
ಕನಸ ಕಂಗಳ ಗೆಳೆಯಾ...!
ಅಂದು ನಿನ್ನ ಕನಸ್ಸು ತುಂಬಿದ ಕಂಗಳ ನೋಡುತ್ತಾ ಕುಳಿತ ನನಗನಿಸಿತು,
ನಿನ್ನಲ್ಲೇಕೆ ಇಂತಹ ಸೆಳೆತವೆಂದು....
ಆ ನಿನ್ನ ಹೊಳಪು ಕಣ್ಣೇ ಅಥವಾ ಆ ನಿನ್ನ ಮಿನುಗು ನಗುವೇ??
ಆ ನಿನ್ನ ಬೆಚ್ಚನೆಯ ಅಪ್ಪುಗೆಯೇ ಅಥವಾ ಆ ನಿನ್ನ ದನಿಯ ಹದವೇ ??
ನೀ ನನಗೆ ಉಣ ಬಡಿಸುತ್ತಿರುವ ಒಲುಮೆಯೇ ಅಥವಾ ನಿನ್ನ ನಗುಮುಗದ ಅಮಲೇ ??
ನಿನ್ನ ಬೆರಳುಗಳು ನನ್ನ ಹೆಸರನು ನೋಡಿ ನನಗನಿಸಿತು,
ಸೆಳೆತವೇಕಾದರೇನು??
ನಿನ್ನ ಸನಿಹವೇ ನನಗೆ ಸಾಕೆಂದು....
-ಕಾವ್ಯಧಾರೆ
ನಿನ್ನಲ್ಲೇಕೆ ಇಂತಹ ಸೆಳೆತವೆಂದು....
ಆ ನಿನ್ನ ಹೊಳಪು ಕಣ್ಣೇ ಅಥವಾ ಆ ನಿನ್ನ ಮಿನುಗು ನಗುವೇ??
ಆ ನಿನ್ನ ಬೆಚ್ಚನೆಯ ಅಪ್ಪುಗೆಯೇ ಅಥವಾ ಆ ನಿನ್ನ ದನಿಯ ಹದವೇ ??
ನೀ ನನಗೆ ಉಣ ಬಡಿಸುತ್ತಿರುವ ಒಲುಮೆಯೇ ಅಥವಾ ನಿನ್ನ ನಗುಮುಗದ ಅಮಲೇ ??
ನಿನ್ನ ಬೆರಳುಗಳು ನನ್ನ ಹೆಸರನು ನೋಡಿ ನನಗನಿಸಿತು,
ಸೆಳೆತವೇಕಾದರೇನು??
ನಿನ್ನ ಸನಿಹವೇ ನನಗೆ ಸಾಕೆಂದು....
-ಕಾವ್ಯಧಾರೆ
ಪೀಜಿ ಪುರಾಣ...!!!
ಮನೆಯಲ್ಲಿ ಆರಾಮಾಗಿ ತಿಂದುಂಡು ಇದ್ದ ನಾನು ಮೊದಲನೇ ಸಾರಿ ಅಪ್ಪ-ಅಮ್ಮನಿಂದ ದೂರವಾಗಿ ಬೇರೆ ಊರಿಗೆ ಹೋಗಿದ್ದು ಹುಟ್ಟಿ ಹದಿನೆಂಟು ವರ್ಷದ ನಂತರ. ನನ್ನ ಪುಣ್ಯಕ್ಕೆ ಹಾಸ್ಟೆಲ್ ಚೆನ್ನಾಗಿತ್ತು , ನಂತರ ನನ್ನ ಮೊದಲನೇ ನೌಕರಿಯ ಸಮಯಕ್ಕೆ ಇದ್ದ ಮನೆಯಂತು ಸ್ವರ್ಗದ ಪ್ರತಿರೂಪ. ಎಲ್ಲ ವ್ಯವಸ್ಥೆಗಳನ್ನು ಹೊಂದಿದ್ದ ವಿಶಾಲವಾದ, ಗಾಳಿ ಬೆಳಕಿದ್ದ ಮನೆ. ನೋಡಲು ಟೀವಿ , ಬಳಸಲು ಅಂತರ್ಜಾಲ , ಇನ್ವರ್ಟರ್ ( ಕನ್ನಡದಲ್ಲಿ ಅರ್ಥ?? ಉಹ್ಮು ಗೊತ್ತಿಲ್ಲಾ..!!) ಹಾಗೇ ಏನೇನೋ ವ್ಯವಸ್ಥೆಗಳು.
ತಮ್ಮ ಮಕ್ಕಳಂತೆ ನಮ್ಮನ್ನು ಪ್ರೀತಿಸುತ್ತಿದ್ದ ಓನರ್ ಆಂಟಿ ಹಾಗೂ ಅಂಕಲ್. ಇಂತಿಪ್ಪ ಸ್ವರ್ಗದಲ್ಲಿ ತೇಲುತ್ತಿದ್ದ ನಾನು ಧೊಪ್ಪನೆ ಕೆಳಗೆ ಬಿದ್ದಿದ್ದು ನನ್ನ ನೌಕರಿ ಬದಲಾಯಿಸಿ ಬೆಂಗಳೂರಿಗೆ ಬಂದಾಗ.
ನನ್ನ ಲಗ್ಗೆಜ್ಗಳನ್ನು ಹೊತ್ತು ತಂದ ರಾಣಿ ಚೆನ್ನಮ್ಮ ರೈಲು ನನ್ನ ಅಪ್ಪ-ಅಮ್ಮನೊಂದಿಗೆ ನನ್ನನ್ನು ಇಳಿಸಿ ತನ್ನ ಪಾಡಿಗೆ ತನು ಹೋಯಿತು ಅಲ್ಲಿಂದ ಚಿಕ್ಕಪ್ಪನ ಸೇರಿತು ನಮ್ಮ ಪಯಣ. ಆಲ್ಲಿಂದ ನನ್ನ ಆಫಿಸ್ ಒಂದೂವರೆ ತಾಸಿನ ಹಾದಿ. ಈ ಬೆಂಗಳೂರಿನ ಟ್ರಾಫಿಕ್ಕಿನಲ್ಲಿ ದಿನ ಅಷ್ಟೊತ್ತು ಅಲೆದಾಡುವುದೆಂದರೆ ಅದೊಂದು ಯುದ್ದವೇ ಸೈ. ಸರಿ...ನನ್ನ ಪೀಜಿ ಹಂಟಿಂಗ್ ಅಂದೇ ಶುರುವಾಯಿತು.
ಮೊದಲೇ ಸುಲೇಖಾ, ಕ್ವಿಕ್- ಆರ್ ಅದು ಇದು ಹತ್ತು ಹಲವಾರು ಸೈಟ್ಗಳಿಂದ ಪುಟಗಳಷ್ಟು ವಿಳಾಸ ಹಾಗು ದೂರವಾಣಿ ಸಂಖ್ಯೆಗಳನ್ನು ಬರೆದುಕೊಂಡಿದ್ದೆ. ( ಯಾವ ಪರೀಕ್ಷೆಗೂ ಇಷ್ಟು ಪೂರ್ವ ತಯಾರಿ ಮಾಡಿರಲ್ಲಿಲ್ಲವೇನೋ..). ಯಾರಿಗೆ ಕರೆ ಮಾಡಿದರೂ "ಬನ್ನಿ ಮೇಡಂ.... ನೋಡ್ಕೊಂಡು ಹೋಗಿ" ಅನ್ನೋ ಉತ್ತರ. ನಾನೋ?? ಹೊಸ ಪೀಜಿಯಾ ಕನಸು ಕಾಣುತ್ತ ಹೊರಟೆ . "ಪ್ರಥಮ ಪ್ರೇಮಂ ದಂತ ಭಗ್ನಂ " ಎನ್ನೋ ಹಾಗೆ, ನಾನು ನೋಡಿದ ಮೊದಲ ಪೀಜಿ ರೈಲಿನ ಬೋಗಿಯ ಹಾಗಿತ್ತು.
ಮೂರಡಿ ಆರಡಿ ಜಾಗ. ಕಟ್ಟಲು ಕೋಣೆ. ಗಾಳಿ ಬೆಳಕೂ ಬರಲಾರದಷ್ಟು ಸೆಕ್ಯುರಿಟಿ. ಅದಕ್ಕೆ ಆರು ಸಾವಿರ ಬಾಡಿಗೆ. ಓನರ್ ಗೆ ಕಿರಿಕಿರಿ ಮಾಡೋಣ ಅನ್ನೋ ಉದ್ದೇಶದಿಂದ "ಇಷ್ಟೇನಾ ರೂಮೂ" ಅಂತ ಕೇಳಿದ್ರೆ "ಬೇಕಾದರೆ ಇರಿ, ಇಲ್ಲಾ ಅಂದರೆ ಹೋಗಿ"
ಅಂತ ನನ್ನ ತಲೆಯನ್ನೇ ಬಿಸಿ ಮಾಡಿದಳು ಆಕೆ. ಎರಡನೇ ಪಿಜಿಯದು ಇನ್ನೊಂದು ಕರ್ಮಕಾಂಡ. ಅಡುಗೆ ಮನೆಯನ್ನೇ ರೂಂ ಮಾಡಿದ್ದಾರೆ ಅವರು. ಅಲ್ಲಿನ ಕಟ್ಟೆಗಳೇ ಕಪಾಟುಗಳು. ಹತ್ತು ಜನರಿಗೆ ಸೇರಿ ಒಂದೇ ಶೌಚಾಲಯ. ಮನೆಯಲ್ಲೇ ಇದ್ದ ಮುವರೊಡನೆ "ನಿನ್ನಿಂದ ನಂಗ್ ತಡ ಆತು" ಅಂತ ಕಿತ್ತಾಡಿ ಹೋಗುವ ನನ್ನಂಥವಳಿಗೆ ಇದೆಲ್ಲಾ ಸರಿ ಹೋಗುವುದಿಲ್ಲಾ ಅಂತ ಬಿಟ್ಟು ಬಂದೆ. ಮೂರನೇಯ ಪೀಜಿಯಲ್ಲಿ ಒಳ ಹೋಗುವ ಮೊದಲೇ ತಮಿಳು ತಲೆಗಳದ್ದೆ ದರ್ಶನ ಹಾಗೂ ನನ್ನ ಓಟ.
ಅಂತ ನನ್ನ ತಲೆಯನ್ನೇ ಬಿಸಿ ಮಾಡಿದಳು ಆಕೆ. ಎರಡನೇ ಪಿಜಿಯದು ಇನ್ನೊಂದು ಕರ್ಮಕಾಂಡ. ಅಡುಗೆ ಮನೆಯನ್ನೇ ರೂಂ ಮಾಡಿದ್ದಾರೆ ಅವರು. ಅಲ್ಲಿನ ಕಟ್ಟೆಗಳೇ ಕಪಾಟುಗಳು. ಹತ್ತು ಜನರಿಗೆ ಸೇರಿ ಒಂದೇ ಶೌಚಾಲಯ. ಮನೆಯಲ್ಲೇ ಇದ್ದ ಮುವರೊಡನೆ "ನಿನ್ನಿಂದ ನಂಗ್ ತಡ ಆತು" ಅಂತ ಕಿತ್ತಾಡಿ ಹೋಗುವ ನನ್ನಂಥವಳಿಗೆ ಇದೆಲ್ಲಾ ಸರಿ ಹೋಗುವುದಿಲ್ಲಾ ಅಂತ ಬಿಟ್ಟು ಬಂದೆ. ಮೂರನೇಯ ಪೀಜಿಯಲ್ಲಿ ಒಳ ಹೋಗುವ ಮೊದಲೇ ತಮಿಳು ತಲೆಗಳದ್ದೆ ದರ್ಶನ ಹಾಗೂ ನನ್ನ ಓಟ.
ಪರದೆಗಳನ್ನು ಹಾಕಿ ಕೋಣೆಗಳನ್ನು ಮಾಡಿದ್ದ ಪಿಜಿ, 'Solitary Confinement' ಪೀಜಿ, ತ್ರಿಕೋನಾಕಾರದ ಕೋಣೆಯ ಪೀಜಿ, ದನದ ಕೊಟ್ಟಿಗೆಯಂತಿರುವ ಪೀಜಿ (ನಮ್ಮಲಿನ ದನದ ಕೊಟ್ಟಿಗೆಯೇ ಬೇಕಷ್ಟು ಚೆನ್ನಾಗಿರುತ್ತದೆ..!!!) , ದಿನದಲ್ಲೂ ಕಗ್ಗತ್ತಲಿರುವ ಪೀಜಿ, ತಿಪ್ಪೇಗುಂಡಿಯಂತಿರುವ ಹೊಲಸು ಪೀಜಿ, ಹೀಗೆ ಮೂವತ್ತಕ್ಕೂ ಹೆಚ್ಚು ಪೀಜಿಗಳನ್ನ ನೋಡಿ, ಕೊನೆಗೆ ಇದ್ದಿದ್ದರಲ್ಲೇ ಆಗಬಹುದು ಎನ್ನುವಂತಾ ಒಂದು ಪೀಜಿಯಲ್ಲಿ ಠಿಕಾಣಿ ಹೂಡಿದ್ದೇನೆ. ಇಲ್ಲಿ ಎಷ್ಟು ದಿನದ ನಂಟೋ ಪರಮಾತ್ಮನೇ ಬಲ್ಲ.
ಎಷ್ಟೋ ಸಲ "ಯಾಕಪ್ಪಾ ದೇವ್ರೇ ಇದೆಲ್ಲ ನನಗೆ ಇದೆಲ್ಲಾ ಬೇಕಿತ್ತು? ಅಲ್ಲೇ ಅಪ್ಪ ಅಮ್ಮನೊಂದಿಗೆ ಮನೆಯಲ್ಲೇ ಇರಬಹುದಿತ್ತಲ್ಲವೇ..." ಅನ್ನಿಸುತ್ತದೆ . ಆದರೆ ಇಲ್ಲಿಯ ಗಳಿಕೆ, ಸುತ್ತಲಿನ ಬಣ್ಣ ಬಣ್ಣದ ಜಗತ್ತು , ಐಶಾರಾಮಿ ಜೀವನದ ರುಚಿ ಎಲ್ಲೂ ಹೋಗದಂತೆ ತಡೆಯುತ್ತದೆ .
ಯಾರೋ ಸರಿಯಾಗೆ ಹೇಳಿದ್ದಾರೆ...
"ಇರುವುದೆಲ್ಲವ ಬಿಟ್ಟು, ಇರುವೆ ಬಿಟ್ಟುಕೊಳ್ಳುವುದೇ ಜೀವನಾ"
- ಕಾವ್ಯಧಾರೆ
Wednesday, 14 November 2012
ಓ ನನ್ನ ಗೆಳೆಯ...
ಹೀಗ್ಯಾಕೆ ಬೆಂಬಿಡದೆ ಕಾಡುತ್ತಿರುವೆ ಓ ನನ್ನ ಗೆಳೆಯ...
ನನಗೂ ನಿನ್ನೊಡನೆ ಮಾತಾಡುವ ಮನವಿದೆ, ಆಲಂಗಿಸುವ ಭರವಿದೆ..
ನಿನ್ನ ನಗುವ ನನ್ನ ತುಟಿಯಲ್ಲಿ ಬೀರುತ್ತ, ನಿನ್ನೊಲವು ಆಗುವ ಚಟವಿದೆ....
ನಿನ್ನ ಬೆರಳುಗಳೊಡನೆ ಆಡುವ ಮನವಿದೆ...
ನಿನ್ನ ಕಣ್ಣಲ್ಲಿ ನನ್ನನ್ನೇ ಕಾಣುತ್ತ ನಿನ್ನುಸಿರಾಗುವ ಹಠವಿದೆ
ಸುತ್ತಲಿರುವ ಬಂಧವನ್ನು ಬೇಧಿಸಿ ನಿನ್ನ ಒಡಲಲ್ಲಿ ಮೈಮರೆಯುವೆ ....
ಹೀಗ್ಯಾಕೆ ಬೆಂಬಿಡದೆ ಕಾಡುತ್ತಿರುವೆ ಓ ನನ್ನ ಗೆಳೆಯ...
ಬಿಡದೆ ಫೋನಾಯಿಸಿತ್ತಿರುವೆ, ತೆಗೆದುಕೊಳ್ಳಬಾರದೇ ನನ್ನ ಕರೆಯ..!
-
ಕಾವ್ಯಧಾರೆ
ನನ್ನ ಡೈರಿಯ ತೆರೆಯುತ್ತಾ...!
ನಾನೊಬ್ಬ ಭಾವುಕ ಜೀವಿ. ಕೆಲವೊಮ್ಮೆ ಏನನ್ನೋ ಯೋಚಿಸುತ್ತ ನಗುತ್ತೇನೆ, ಕೆಲವೊಮ್ಮೆ ಚಿಕ್ಕ ಪುಟ್ಟ ವಿಷಯಗಳಿಗೂ ಕಂಬನಿ ಮಿಡಿಯುತ್ತೇನೆ. ಸುತ್ತಲು ಹತ್ತು ಹಲವರಿದ್ದಾರೆ, ಆದರೆ ಮನಸಿನ ಭಾವವನ್ನು ಅರ್ಥೈಸಿಕೊಳ್ಳಲು ಇರುವುದು ಎಷ್ಟು ಬರೆದರೂ ಮುಗಿಯದಂತ ನನ್ನ ಡೈರಿ ಮಾತ್ರ.
ನನ್ನ ನಗು, ಅಳು, ವಿಚಾರ, ಆಚಾರ ಎಲ್ಲವನ್ನು ಪೆನ್ನಿಸುತ್ತೇನೆ.
ಈ ಬ್ಲಾಗೆಂಬ ಮನೆಯಲ್ಲಿ ಈಗ ತಾನೆ ಕಣ್ಣು ತೆರೆಯುತ್ತಿರುವ ಈ ಮಗುವನ್ನು ತಿದ್ದಿ ಸಲಹಿ ಬೆಳೆಸಿರಿ.
ಧನ್ಯವಾದ,
ಕಾವ್ಯಧಾರೆ
Subscribe to:
Posts (Atom)