Thursday, 15 November 2012

ಈ ಸಂಜೆ ಯಾಕಾಗಿದೆ ನೀನಿಲ್ಲದೆ....!!!!



ಕಳೆದು ಹೋಗಲಿಂದು ನಾ ಅಂದಿನ ಸಂಜೆಯಲಿ,
ಮನದಲ್ಲಿ ಮೂಡುತಿದೆ ಮಧುರ ಭಾವನೆ...
ನಿನ್ನ ಒಲವಿನ ಪರಿ, ನಿನ್ನ ನಗುವಿನ ತರ,
ಮೋಡಿ ಮಾಡುತಿದೆ ನನ್ನ, ಮತ್ತೊಮ್ಮೆ ಭರನೆ...!!!

ಅಂದಿನ ಸಂಜೆಯ ಆ ಸಿಹಿ ಮಾತುಗಳು,
ತಂದಿವೆ ನನ್ನಲಿ ಮಂದಹಾಸದ ಉಲ್ಲಾಸ....
ನಿನ್ನ ಕಣ್ಣಿನ ಮಿಂಚು, ನಿನ್ನ ಮಾತಿನ ಝರಿ,
ಮರೆಸಿವೆ ನನ್ನೆದೆಯೊಳಗಿನ ಇರುಸುಮರುಸ....!!!

ದೂರದಲಿ ಇದ್ದರೂ ಈ ನನ್ನ ತನುವು,
ನಿನ್ನೆದೆಯಲಿ ಮುದ್ದಾದ ಗೂಡ ಕಟ್ಟುತಿದೆ....
ಸುತ್ತಲು ಹಲವರಿದ್ದರೂ, ನಾನಿಲ್ಲಿ ಒಬ್ಬಂಟಿ,
ಹಲವರಿಯುತಿದೆ ಇಂದು, ಈ ಸಂಜೆ ಯಾಕಾಗಿದೆ ನೀನಿಲ್ಲದೆ....!!!!

-ಕಾವ್ಯಧಾರೆ

2 comments:

  1. ಸಂಜೆಯಾಗುತಿದ್ದ ಹಾಗೆ ಕತ್ತಲು ಬೆಳಕಿನ ಸುವರ್ಣ ಬಣ್ಣದ ಧೀರ್ಘ ಸಂಧಿ ಮನದಲ್ಲಿ ಉಕ್ಕಿಸುವ ಮಾತುಗಳು, ಭಾವಗಳು ಬಲು ಸುಂದರ...ಭಾವಗಳ ವಿನಿಮಯಕ್ಕೆ ಹೃದಯವಿದ್ದರೆ ಸಾಕು..ದೂರವಲ್ಲ..ಚಂದದ ಸಾಲುಗಳು..ಅಭಿನಂದನೆಗಳು

    ReplyDelete