ಹೀಗ್ಯಾಕೆ ಬೆಂಬಿಡದೆ ಕಾಡುತ್ತಿರುವೆ ಓ ನನ್ನ ಗೆಳೆಯ...
ನನಗೂ ನಿನ್ನೊಡನೆ ಮಾತಾಡುವ ಮನವಿದೆ, ಆಲಂಗಿಸುವ ಭರವಿದೆ..
ನಿನ್ನ ನಗುವ ನನ್ನ ತುಟಿಯಲ್ಲಿ ಬೀರುತ್ತ, ನಿನ್ನೊಲವು ಆಗುವ ಚಟವಿದೆ....
ನಿನ್ನ ಬೆರಳುಗಳೊಡನೆ ಆಡುವ ಮನವಿದೆ...
ನಿನ್ನ ಕಣ್ಣಲ್ಲಿ ನನ್ನನ್ನೇ ಕಾಣುತ್ತ ನಿನ್ನುಸಿರಾಗುವ ಹಠವಿದೆ
ಸುತ್ತಲಿರುವ ಬಂಧವನ್ನು ಬೇಧಿಸಿ ನಿನ್ನ ಒಡಲಲ್ಲಿ ಮೈಮರೆಯುವೆ ....
ಹೀಗ್ಯಾಕೆ ಬೆಂಬಿಡದೆ ಕಾಡುತ್ತಿರುವೆ ಓ ನನ್ನ ಗೆಳೆಯ...
ಬಿಡದೆ ಫೋನಾಯಿಸಿತ್ತಿರುವೆ, ತೆಗೆದುಕೊಳ್ಳಬಾರದೇ ನನ್ನ ಕರೆಯ..!
-
ಕಾವ್ಯಧಾರೆ
ಕಾವ್ಯ...ನಿಮ್ಮ ಹೆಸರಾ?? ಅಥವಾ ಹರಿದ ಧಾರೆಯ ಉಸಿರಾ??? ಬಹಳ ಚನ್ನಾಗಿದೆ ತುಡಿತದ ಭಾವ.. ಶುಭವಾಗಲಿ ನಿಮ್ಮ ಬ್ಲಾಗಿಗೆ ಮತ್ತು ನಡೆಯಲಿ ನಿರಂತರ ಸೃಜನಶಾರದಾ ಸೇವೆ, ನಮ್ಮ ಬೆತ (ಬೆನ್ನು ತಟ್ಟುವಿಕೆ) ಕಂಡಿತಾ...
ReplyDeleteಕಾವ್ಯ..! ಭೋರ್ಗರೆವ ನನ್ನ ಭಾವಲಹರಿಯ ಒರತೆ ಕಾವ್ಯ..!
ReplyDeleteಧನ್ಯವಾದಗಳು ಸರ್..! ಭೇಟಿ ನೀಡುತ್ತಿರಿ..:)
ತುಂಬಾ ಚೆನಾಗಿದೆ...
ReplyDeleteಧನ್ಯವಾದಗಳು ಸುಮಂತ್
Deleteಕಣ್ಣಲ್ಲಿ ಕಣ್ಣಾಗುವ ಶಕ್ತಿ ಪ್ರೇಮಿಗಳಿದ್ದಾರೆ..ನೀರಲ್ಲಿ ನೀರಾಗುವ ತಾಕತ್ ಜಲಧಾರೆಗಿರುತ್ತದೆ...ಪದಗಳಿಗೆ ಉತ್ಕಟತೆ ತುಂಬಿ ಭಾವ ಲಹರಿಯನ್ನು ಹರಿಯ ಬಿಡುವ ಇಂತಹ ಸಾಲುಗಳು ಮನದಾಳದಲ್ಲಿ ಕೊಡುವ ಸಂತಸ ಅಮೋಘ.ಇಂತಹ ಪದಗಳ ಸಾಲಿನಿಂದ ಶುರುವಾದ ನಿಮ್ಮ ಲಹರಿ ಹರಿಯಲಿ...ಅಭಿನಂದನೆಗಳು ಮೇಡಂ
ReplyDeleteಧನ್ಯವಾದಗಳು ಸರ್..! ಭೇಟಿ ನೀಡುತ್ತಿರಿ..:)
Deleteಆಜಾದ್ ಭಾಯ್ ಆಗಲೇ ಆಶೀರ್ವದಿಸಿ ಆಗಿದೆ.
ReplyDeleteಅಂದ ಮೇಲೆ ನಿಮ್ಮ ಪಯಣ ಒಳ್ಳೆಯ ಕಡೆಯೇ ಸಾಗುತ್ತದೆ ಬಿಡಿ :-)
ಮುಂದುವರಿಯಲಿ ಕಾವ್ಯಧಾರೆ.. :-)
ಧನ್ಯವಾದಗಳು ಪ್ರಶಾಂತ್ :) ಭೇಟಿ ನೀಡುತ್ತಿರಿ..:)
Deleteಚೆನ್ನಾಗಿದೆ ಕಣ್ರೀ...ಬರಿತಾ ಇರಿ...ಸಾಮಾನ್ಯವಾದ ಗೆಳತಿಯ ಒಡಲು ಎಂದು ಬರೆಯುವುದನ್ನು ಓದಿದ್ದೆ...ಇಲ್ಲಿ ಗೆಳೆಯನ ಒಡಲು ಪದದ ಬಳಕೆ ಇಷ್ಟವಾಯಿತು...
ReplyDeleteನಮಸ್ತೆ
ಧನ್ಯವಾದಗಳು..:)
ReplyDelete