ನಾನೊಬ್ಬ ಭಾವುಕ ಜೀವಿ. ಕೆಲವೊಮ್ಮೆ ಏನನ್ನೋ ಯೋಚಿಸುತ್ತ ನಗುತ್ತೇನೆ, ಕೆಲವೊಮ್ಮೆ ಚಿಕ್ಕ ಪುಟ್ಟ ವಿಷಯಗಳಿಗೂ ಕಂಬನಿ ಮಿಡಿಯುತ್ತೇನೆ. ಸುತ್ತಲು ಹತ್ತು ಹಲವರಿದ್ದಾರೆ, ಆದರೆ ಮನಸಿನ ಭಾವವನ್ನು ಅರ್ಥೈಸಿಕೊಳ್ಳಲು ಇರುವುದು ಎಷ್ಟು ಬರೆದರೂ ಮುಗಿಯದಂತ ನನ್ನ ಡೈರಿ ಮಾತ್ರ.
ನನ್ನ ನಗು, ಅಳು, ವಿಚಾರ, ಆಚಾರ ಎಲ್ಲವನ್ನು ಪೆನ್ನಿಸುತ್ತೇನೆ.
ಈ ಬ್ಲಾಗೆಂಬ ಮನೆಯಲ್ಲಿ ಈಗ ತಾನೆ ಕಣ್ಣು ತೆರೆಯುತ್ತಿರುವ ಈ ಮಗುವನ್ನು ತಿದ್ದಿ ಸಲಹಿ ಬೆಳೆಸಿರಿ.
ಧನ್ಯವಾದ,
ಕಾವ್ಯಧಾರೆ
ಬ್ಲಾಗ್ ಲೋಕಕ್ಕೆ ಸ್ವಾಗತ ಮೇಡಂ...ಪದಗಳ ಲೋಕವೇ ಚಂದ.ಇಲ್ಲಿ ಸೂರ್ಯ ಚಂದ್ರ ಇರುವುದಿಲ್ಲ...ಮುಳುಗುತ್ತದೆ, ಹುಟ್ಟುತ್ತದೆ ಎನ್ನುವ ತವಕವಿಲ್ಲ...ಬರೆದಾಗ ಮೂಡುತ್ತದೆ ಮನದಾಳದಲ್ಲಿ ರಂಗವಲ್ಲಿ...ಅದನ್ನ ಅಂಗಳದಲ್ಲಿ ಇಟ್ಟರೆ ಚಂದದ ಚಿತ್ತಾರ..
ReplyDeleteಅಭಿನಂದನೆಗಳು..ಹರಿಯಲಿ ನಿಮ್ಮ ಲೇಖನಗಳು...ಓದಲು ನಾವು ಇದ್ದೇವೆ.
ಭಾವಜೀವಿಗಳಿಗೆ ಒಳ್ಳೆಯ ತಾಣ ಬ್ಲಾಗು.
ReplyDeleteಬ್ಲಾಗೆಂದರೆ online diary ಎಂದೂ ಅರ್ಥವಿದೆ. ಬೇರೆಯವರು ಓದುವಂತೆ ನಿಮ್ಮ ಮನದಾಳದ ಭಾವಗಳನ್ನ ಬಿಚ್ಚಡಬಹುದೆಂದೇ ಅರ್ಥವಾಗಿರಬಹುದು ಬ್ಲಾಗ್ಗಳ ಹುಟ್ಟಿನ ಉದ್ದೇಶ..
ಯಾರು ಕೇಳಲಿ ಎಂದು ನಾನು ಹಾಡುವುದಿಲ್ಲ ಎಂಬ ಮೈಸೂರು ಅನಂತ ಸ್ವಾಮಿಗಳ ಹಾಡಿದೆಯಲ್ಲಾ, ಅದೇ ರೀತಿ ಯಾರೋ ಓದುವರೆಂದು ಬರೆಯದೇ, ನಿಮ್ಮ ಖುಷಿಗೆಂದೇ ನೀವು ಬರೆದರೆ ಯಶ, ಖುಷಿ ಎರಡೂ ಸಿಗುಬಹುದೆಂದು ನನ್ನ ಅನಿಸಿಕೆ.
ಈಗಲೇ ೬೦ ಜನ ಬಂದು ಓದಿದ್ದಾರೆ ನಿಮ್ಮ ಬ್ಲಾಗನ್ನು!!
ಹಾಗಾಗಿ ಹೆಚ್ಚೇನೂ ಹೇಳುವ ಅಗತ್ಯವಿಲ್ಲ ಎಂದುಕೊಳ್ಳುತ್ತೇನೆ. ನಾನು ಹೇಳಿದ್ದೆಲ್ಲಾ ಎಲ್ಲರಿಗೂ ಗೊತ್ತಿರುವ ವಿಷಯವೇ :-) .. ಶುಭವಾಗಲಿ :-) :-)